ಟಾರ್ಗೆಟ್ ಮಾಡಿ ಮಾತನಾಡಿದ ದಿವಾಕರ್ ಗೆ ಬುದ್ಧಿ ಹೇಳಿದ ಅಕುಲ್ | Filmibeat Kannada

2017-12-08 506

'ಬಿಗ್ ಬಾಸ್' ಮನೆಯಲ್ಲಿ 'ಗಂಧದ ಗುಡಿ' ಟಾಸ್ಕ್ ಚಾಲ್ತಿಯಲ್ಲಿದ್ದಾಗ... ಕರಡಿಯನ್ನು (ಸಮೀರಾಚಾರ್ಯ) ಸೆರೆ ಹಿಡಿಯುತ್ತಿದ್ದಾಗ... ದಿವಾಕರ್ ನಡೆದುಕೊಂಡ ರೀತಿ 'ಮಾಸ್ಟರ್' ಅಕುಲ್ ಬಾಲಾಜಿಗೆ ಕೊಂಚ ಕೂಡ ಇಷ್ಟ ಆಗ್ಲಿಲ್ಲ.! ಕರಡಿ (ಸಮೀರಾಚಾರ್ಯ) ಹಾಗೂ ಬೆಟ್ಟಪ್ಪ (ರಿಯಾಝ್) ಮಧ್ಯೆ ಜಟಾಪಟಿ ನಡೆಯುತ್ತಿದ್ದರೆ, ಮಧ್ಯದಲ್ಲಿ ಮೂಗು ತೂರಿಸಿದ ದಿವಾಕರ್ ಬೇಕಾಬಿಟ್ಟಿ ಮಾತನಾಡಿದರು.''ಕ್ಯಾಮರಾ ಮುಂದೆ ರಿಯಾಝ್ ಡ್ರಾಮಾ ಮಾಡ್ತಿದ್ದಾರೆ'' ಅಂತೆಲ್ಲ ಆರೋಪ ಮಾಡಿದ ದಿವಾಕರ್, 'ಥೂ' ಎಂದು ಉಗಿದರು. ಸಂಬಂಧ ಇಲ್ಲದ ವಿಚಾರಕ್ಕೆ ಮಧ್ಯ ಪ್ರವೇಶಿಸಿ ಇಷ್ಟೆಲ್ಲ ರಾದ್ಧಾಂತ ಮಾಡಿದ ದಿವಾಕರ್ ಗೆ ಅಕುಲ್ ಬುದ್ದಿ ಹೇಳಿದರು.''ಅಲ್ಲಿ ಏನೆಲ್ಲ ಮಾತುಗಳು ಬಂತು ಅಂತ ನಿಮ್ಗೆ ಗೊತ್ತಾ.? ಅಲ್ಲಿ ಎಳೆಯುತ್ತಿರುವುದು ನಿಮ್ಮನ್ನಲ್ಲ. ಕಾಡು ಪ್ರಾಣಿಗಳಾಗಿ ನೀವು ಹೀಗೆ ವರ್ತಿಸುತ್ತಿದ್ದರೆ, ನಾವು ಹೇಗೆ ವರ್ತಿಸಬೇಕು.?'' ಎಂದು ರೊಚ್ಚಿಗೆದ್ದಿದ್ದ ದಿವಾಕರ್ ಗೆ ಅಕುಲ್ ಬುದ್ಧಿ ಹೇಳಿದರು.''ಬಾಯಿ ತಪ್ಪಿ ಮಾತು ಬಂದಿರುತ್ತದೆ. ಅವರೊಬ್ಬರೇನಾ (ರಿಯಾಝ್) ಹಾಗೆ ಹೇಳಿದ್ದು.? ''ನಿಮ್ಮ ಅಪ್ಪ ಬಂದರೂ ಕೂಡ ನನ್ನನ್ನ ಕರ್ಕೊಂಡು ಹೋಗಕ್ಕಾಗಲ್ಲ'' ಅಂತ ಅವರು (ಸಮೀರಾಚಾರ್ಯ) ಕೂಡ ಅಂದರು'' ಎಂದು ಪರಿಸ್ಥಿತಿಯನ್ನ ಅಕುಲ್ ವಿವರಿಸಿದಾಗ ''ಅದು ತಪ್ಪು'' ಎಂದು ದಿವಾಕರ್ ಒಪ್ಪಿಕೊಂಡರು.

Bigg Boss Kannada 5: Week 8: big boss is one of the big reality show in colors kannada and there akul balaji gave guest entry in to bigg boss house and he advices to diwakar ,